ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ತಮ್ಮ ಊರುಗಳತ್ತ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಇಂದು ಕೂಡ ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಜನಸಾಗರವೇ ಕಂಡುಬಂದಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ ಇಂದು 908 ವಿಶೇಷ ಬಸ್ಗಳನ್ನು ಕಾರ್ಯಾಚರಣೆಗೊಳಿಸಿದೆ. ಮೆಜೆಸ್ಟಿಕ್ ಮಾತ್ರವಲ್ಲದೆ, ನಗರದ ಇತರೆ 11 ಸ್ಥಳಗಳಲ್ಲೂ ಬಸ್ಗಳ ಪಿಕಪ್ ಪಾಯಿಂಟ್ ವ್ಯವಸ್ಥೆ ಮಾಡಲಾಗಿದೆ. ಟಿಕೆಟ್ ಕಾಯ್ದಿರಿಸಲು ವಿಶೇಷ ಕೌಂಟರ್ಗಳನ್ನೂ ತೆರೆಯಲಾಗಿದೆ.
ಮಂಗಳೂರಿಗೆ 49, ದಾವಣಗೆರೆಗೆ 42, ಹುಬ್ಬಳ್ಳಿ ಮತ್ತು ಕುಂದಾಪುರಕ್ಕೆ ತಲಾ 35, ಬೆಳಗಾವಿಗೆ 29, ಶಿವಮೊಗ್ಗ ಮತ್ತು ತಿರುಪತಿಗೆ ತಲಾ 24 ವಿಶೇಷ ಬಸ್ಗಳು ಸಂಚರಿಸಿವೆ.
ಇನ್ನು ಹೊಸಪೇಟೆಗೆ 23, ವಿಜಯಪುರ ಮತ್ತು ತಿರುಚಿರಾಪಳ್ಳಿಗೆ ತಲಾ 22, ಗೋಕರ್ಣ, ಸಾಗರ ಮತ್ತು ಮಧುರೈಗೆ ತಲಾ 21 ಬಸ್ಗಳನ್ನು ನಿಯೋಜಿಸಲಾಗಿದೆ. ಶಿರಸಿ, ಉಡುಪಿ, ಬಳ್ಳಾರಿ, ಕಲಬುರಗಿ ಸೇರಿದಂತೆ ಹಲವು ಪ್ರಮುಖ ನಗರಗಳಿಗೂ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ದೀಪಾವಳಿ ಹಬ್ಬದ ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಹೆಚ್ಚುವರಿ ಬಸ್ಗಳನ್ನು ನಿಯೋಜಿಸಿದ್ದು, ಮೆಜೆಸ್ಟಿಕ್ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಜನದಟ್ಟಣೆ ಮುಂದುವರಿದಿದೆ.